Leseplan-informasjon

BibleProject | ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ / ಭಾಗ 1 - ಲೂಕನುPrøve

BibleProject | ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ / ಭಾಗ 1 - ಲೂಕನು

Dag 3 av 20

"ಮುಂದಿನ ವಿಭಾಗದಲ್ಲಿ,ಲೂಕನು ಅತಿ ಬೇಗನೇ ಮುಂದೆ ಸಾಗುತ್ತಾನೆ. ಈಗ ಯೋಹಾನನು ಪ್ರವಾದಿಯಾಗಿದ್ದು, ಅವನು ಯೋರ್ದಾನ್ ನದಿಯಲ್ಲಿ ನವೀಕರಣದ ಆಂದೋಲನಕ್ಕೆ ಮುಂದಾಳತ್ವವನ್ನು ವಹಿಸುತ್ತಿದ್ದಾನೆ. ಇಸ್ರಾಯೇಲ್ಯರಲ್ಲಿ ಬಡವರು, ಶ್ರೀಮಂತರು, ಸುಂಕದವರು, ಮತ್ತೂ ಸೈನಿಕರು ಸಹ ದೀಕ್ಷಾಸ್ನಾನ ಮಾಡಿಸಿಕೊಳ್ಳಲು ಬರುತ್ತಿದ್ದಾರೆ.ಬಹುಕಾಲದ ಹಿಂದೆ, ಇಸ್ರಾಯೇಲರು ಯೂರ್ದಾನ್ ನದಿಯನ್ನು ದಾಟಿ ಈ ದೇಶವನ್ನು ಬಾಧ್ಯವಾಗಿ ಹೊಂದುವುದಕ್ಕಾಗಿ ಬಂದರು, ಆಗ ದೇವರು ಅವರಿಗೆ ಒಂದು ಜವಾಬ್ದಾರಿಯನ್ನು ಕೊಟ್ಟನು. ಆತನನ್ನು ಮಾತ್ರವೇ ಸೇವಿಸಬೇಕು, ನೆರೆಹೊರೆಯವರನ್ನು ಪ್ರೀತಿಸಬೇಕು, ನ್ಯಾಯವನ್ನು ಪಾಲಿಸಬೇಕು ಎಂಬುದಕ್ಕಾಗಿ ಅವರನ್ನು ಕರೆದನು. ಅವರು ಅದರಲ್ಲಿ ಪದೇ ಪದೇ ವಿಫಲರಾದರೆಂದು ಹಳೆ ಒಡಂಬಡಿಕೆಯ ಕಥೆಗಳಿಂದ ನಾವು ತಿಳಿದುಕೊಳ್ಳುತ್ತೇವೆ, ಆದುದರಿಂದ ಯೋಹಾನನು ಇಸ್ರಾಯೇಲ್ಯರಿಗೆ ಹೊಸದಾದ ಆರಂಭಕ್ಕಾಗಿ, ಅವರು ತಿರುಗಿ ನದಿಯ ಮೂಲಕ ಹಾದು ಹೋಗಿ ತಮ್ಮನ್ನು ತಾವು ದೇವರಿಗೆ ಪುನಃ ಸಮರ್ಪಿಸಲ್ಪಟ್ಟವರಾಗಿ, ದೇವರು ಮುಂದೆ ಮಾಡಲಿಕ್ಕಿರುವ ಹೊಸ ಕಾರ್ಯಕ್ಕಾಗಿ ಸಿದ್ಧರಾಗಿ ಹೊರಬರಬೇಕೆಂದು ಅವರನ್ನು ಕರೆಯುತ್ತಿದ್ದಾನೆ. ಈಗ ಯೇಸು ತನ್ನ ರಾಜ್ಯದ ಕಾರ್ಯವನ್ನು ಪ್ರಾರಂಭಿಸಲು ಸಿದ್ಧನಾಗಿ ಯೊರ್ದಾನ್ ನದಿಯಲ್ಲಿ ಕಾಣಿಸಿಕೊಂಡನು. ಯೇಸು ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಂಡನು, ಆಗ ಆಕಾಶವು ತೆರೆಯಿತು, ಪರಲೋಕದಿಂದ ಒಂದು ಸ್ವರವು ಕೇಳಿಬಂತು: "ನೀನು ನನ್ನ ಪ್ರಿಯ ಮಗನು, ನಾನು ನಿನ್ನನ್ನು ಮೆಚ್ಚಿದ್ದೇನೆ." ಈಗ, ಇಲ್ಲಿನ ದೇವರ ಮಾತುಗಳು ಇಬ್ರಿಯರ ಪವಿತ್ರಗ್ರಂಥಗಳ ಪುನರುಚ್ಚಾರಣೆಗಳಿಂದ ತುಂಬಿವೆ. ಅದರ ಮೊದಲ ಸಾಲು 2 ಕೀರ್ತನೆಯದು, ಇದರಲ್ಲಿ ದೇವರು ಒಬ್ಬ ರಾಜನು ಬಂದು, ಆತನು ಯೆರೂಸಲೇಮಿನಲ್ಲಿ ಆಳುವನು, ಜನಾಂಗಗಳ ಮಧ್ಯದಲ್ಲಿರುವ ಕೆಟ್ಟದ್ದನ್ನು ಎದುರಿಸುವನು ಎಂದು ವಾಗ್ದಾನ ಮಾಡಿದ್ದಾನೆ. ಈ ಮುಂದಿನ ಸಾಲು ಪ್ರವಾದಿಯಾದ ಯೆಶಾಯನ ಪುಸ್ತಕದಿಂದಿರುವಂಥದ್ದು, ಇದು ಮೆಸ್ಸೀಯನನ್ನು ಸೂಚಿಸುತ್ತದೆ, ಆತನು ಸೇವಕನಾಗಿ, ಇಸ್ರಾಯೇಲರಿಗೋಸ್ಕರ ಶ್ರಮೆಯನ್ನು ಅನುಭವಿಸಿ ಸಾಯುವನು. ಇದಾದ ನಂತರ, ಲೂಕನು ವಂಶಾವಳಿಯನ್ನು ಕೊಟ್ಟಿದ್ದಾನೆ, ಅದು ಯೇಸುವಿನ ಮೂಲವು (ಇಸ್ರಾಯೇಲಿನ ರಾಜನಾದ) ದಾವೀದನವರೆಗೂ, ಆಮೇಲೆ (ಇಸ್ರಾಯೇಲಿನ ಮೂಲಪಿತೃವಾದ) ಅಬ್ರಹಾಮನವರೆಗೂ, ಆಮೇಲೆ (ಮನುಕುಲದ ಮೂಲಪಿತೃವಾದ) ಆದಾಮನವರೆಗೂ ಇರುವುದಾಗಿ ನಿರೂಪಿಸುತ್ತದೆ. ಇದರಲ್ಲಿ, ಇಸ್ರಾಯೇಲರನ್ನು ಮಾತ್ರವಲ್ಲ ಆದರೆ ಇಡೀ ಮಾನವಕುಲವನ್ನು ನೂತನಪಡಿಸಲು ದೇವರಿಂದ ಬಂದ ಮೆಸ್ಸೀಯ ರಾಜನಾಗಿ ಯೇಸುವನ್ನು ನೋಡಲು ಲೂಕನು ನಮಗೆ ಸಹಾಯ ಮಾಡುತ್ತಾನೆ. ಓದಿರಿ, ಯೋಚಿಸಿರಿ ಮತ್ತು ಪ್ರತಿಕ್ರಿಯಿಸಿರಿ: •ಲೂಕನು 3: 21-22 ಅನ್ನು ಯೆಶಾಯ 42: 1-4 ಮತ್ತು ಕೀರ್ತನೆ 2: 7-9 ರಲ್ಲಿರುವ ದೇವರ ಮಾತುಗಳೊಂದಿಗೆ ಹೋಲಿಸಿ ನೋಡಿರಿ. ನೀವು ಏನನ್ನು ಗಮನಿಸಿದ್ದಿರಿ? •ಸ್ನಾನಿಕನಾದ ಯೋಹಾನನ ಗುರುತನ್ನು ಮತ್ತು ಉದ್ದೇಶವನ್ನು ಮುಂತಿಳಿಸಿದ ಪ್ರವಾದನೆಗಳನ್ನು ಓದಿರಿ (ಯೆಶಾಯ 40: 3-5, ಮಲಾಕಿ 4: 5). ಈ ವಾಕ್ಯಭಾಗಗಳನ್ನು ಲೂಕನ 3: 7-14 ರಲ್ಲಿರುವ ಯೋಹಾನನ ಸಂದೇಶದೊಂದಿಗೆ ಹೋಲಿಸಿ ನೋಡಿರಿ. ನೀವು ಏನನ್ನು ಗಮನಿಸಿದ್ದೀರಿ? •ಯೇಸು ರಾಜನು ಸಾರ್ವಜನಿಕವಾಗಿ ಕಾಣಿಸಿಕೊಂಡ ರೀತಿಗೆ ಸ್ನಾನಿಕನಾದ ಯೋಹಾನನು ಮತ್ತು ಜನಸಮೂಹದವರು ಹೇಗೆ ಪ್ರತಿಕ್ರಿಯಿಸಿದರು? ಇಂದು ನಿಮ್ಮ ಪ್ರತಿಕ್ರಿಯೆ ಏನಾಗಿದೆ? •ಯೇಸುವೇ ನಮಗೆ ಒಂದು ಹೊಸ ಪ್ರಾರಂಭವನ್ನು ನೀಡುವ ಮೆಸ್ಸಿಯ ರಾಜನು. ಆತನಲ್ಲಿ, ನಾವು ದೇವರ ಪ್ರೀತಿಯ ಮೆಚ್ಚಿಗೆಯನ್ನು ಪಡೆಯಬಹುದು. ಸಮಯವನ್ನು ತೆಗೆದುಕೊಂಡುಆತನ ಬಳಿ ಪ್ರಾರ್ಥಿಸಿರಿ. ಕೃತಜ್ಞತೆಯನ್ನು ಸಲ್ಲಿಸಿರಿ, ನೀವು ವಿಷಯದಲ್ಲಿ ಕಷ್ಟಪಡುತ್ತಿದ್ದೀರಿ ಎಂದು ಆತನಿಗೆ ತಿಳಿಸಿ ಮತ್ತು ನಿಮಗೆ ಬೇಕಾದುದ್ದನ್ನು ಆತನ ಬಳಿಯಲ್ಲಿ ಬೇಡಿಕೊಳ್ಳಿರಿ."
Dag 2Dag 4

Om denne planen

BibleProject | ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ / ಭಾಗ 1 - ಲೂಕನು

ಲೂಕನ ಸುವಾರ್ತೆಯನ್ನು 20 ದಿನಗಳಲ್ಲಿ ಓದುವಂತೆ ವ್ಯಕ್ತಿಗಳನ್ನು, ಸಣ್ಣ ಗುಂಪುಗಳನ್ನು ಮತ್ತು ಕುಟುಂಬಗಳನ್ನು ಪ್ರೇರೇಪಿಸಲು ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ ಭಾಗ 1 ಅನ್ನು ಬೈಬಲ್ ಪ್ರಾಜೆಕ್ಟ್ ರಚಿಸಿದೆ. ಅದರಲ್ಲಿ ಪಾಲ್ಗೊಳ್ಳುವವರು ಯೇಸುವನ್ನು ಕಂಡುಕೊಳ್ಳುವುದಕ್ಕೆ...

More

YouVersion bruker informasjonskapsler for å tilpasse opplevelsen din. Ved å bruke nettstedet vårt godtar du vår bruk av informasjonskapsler, som beskrevet i vår Personvernerklæring